UNIVERSAL LIBRARY
OU _198317
೬೬11೬೮1] IVSHAINN
ಚಿಲ್ಲಾಳ ಚರಿತ್ರ. ೧ ವ್ ಎ ಎದದ ಜ್ಯಾರಿ ೧. ಶ್ರೀಯಾಳರಾಜನು, ಅನನ ಹೆಂಡತಿಯಾದ ಚಾಂಗುಣಿಯು ಮತ್ತು ಅವನ ಮಗನಾದ ಚಿಲ್ಲಾಳನು. ಕ ಸಧನ
ಬಹು ಪ್ರಾಚೀನ ಕಾಲದಲ್ಲಿ ಕಾಂತಿಪುರ ಎಂಬ ಹೆಸರಿನ ಒಂದು ನಗ ರವಿತ್ತು. ಆ ನಗರದಲ್ಲಿ ಶ್ರೀಯಾಳನೆಂಬ ಒಬ್ಬ ಪುಣ್ಯ ತ್ಲೋಕಿ ರಾಜನು ಇರುತ್ತಿದ್ದನು. ಅವನ ರಾಜ್ಯದಲ್ಲಿಯ ಪ್ರಜಿಗಳಿಗೆ ದುಃಖವು ಅಥವಾ ಪೀಡೆ ಯು ಯಾವದೂ ಗೊತ್ತಿದ್ದಿಲ್ಲ. ಶ್ರ್ರೀಯಾಳರಾಜನು ತನ್ನ ಪ್ರಜೆಗಳನ್ನು ಅತ್ಯಂತ ಸಂತುಷ್ಟರಾಗಿಡಲಿಕ್ಕೆ ಹಗಲಿರುಳು ಮನಃಪೂರ್ವಕವಾಗಿ ಪ್ರಯತ್ನ ಮಾಡುತ್ತಿದ್ದನು. ದೀನರಿಗೂ ಅನಾಥರಿಗೂ ಅವಯವಹೀನರಿಗೂ ಬಹಳ ದಯಾದಾತ್ಷಿಣ್ಯವನ್ನು ತೋರಿಸುತ್ತಿ ದನು. ಅತಿಥಿ ಅಭ್ಯಾಗತರಿಗಂತೂ ಆದರ ಸತ್ಕಾರ ಮಾಡುವಲ್ಲಿ ಅವನು ಕರ್ಣನ ಅವತಾರವೇ ಆಗಿದ್ದನು. ಅಶಕ್ತ ರಿಗೆ ಸಶಕ್ತರು ಬಲಾತ್ಕಾರವನ್ನು ಅಥವಾ ಹಿಂಸೆಯನ್ನು ಮಾಡಬಾರದೆಂದು ಅವನು ಬಹಳ ದಕ್ಷತೆಯನ್ನು ಇಟ್ಟಿದ್ದನು. ಅವನು ಯಾವತ್ತು ಪ್ರಜೆಗಳಿಗೆ ಸರಿ ಯಾದ ನ್ಯಾಯವು ದೊರಕಬೇಕೆಂದು ಯಾವಾಗಲು ಲವಲವಿಕೆಯುಳ ೈವನಾ ಗಿದ್ದನು. ಅವನು ತನ್ನ ಪ್ರಜೆಗಳಿಗೆ ತನ್ನ ದರ್ಶನಕ್ಕೆ ಬೇಕಾದಾಗ ಬರ ಲಿಕ್ಟೂ ತಮ್ಮ ತಮ್ಮ ದುಃಖಗಳನ್ನು ಹೇಳಿಕೊಳ್ಳಲಿಕ್ಕೂ ತುಂಬಾ ಅನು ಕೂಲತೆಯನ್ನು ಮಾಡಿಕೊಟ್ಟಿದ್ದನು. ಸಾರಾಂಶ-ತಂದೆ ತಾಯಿಗಳು ತಮ್ಮ
ಹೊಟ್ಟೆಯಿಂದ 'ಹುಟ್ಟಿದ ಒಬ್ಬನೇ ಒಬ್ಬಪುಗನಿಸ್ಲೆ_ ಪ್ರೀ 4೫ನೊ ಕ್ಸ] ಯನ್ನೂ ಮಾಡುವಂತೆ ಶ್ರೀಯಾಳರಾಜನು ತನ್ನ ಯಾವತ್ತು ಪ್ರೆಜಿಗಳಿಗೆ ಪ್ರೀತಿಯನ್ನೂ ಅಕೈಕೆಯನ್ನೂ ಮಾಡುತಿ ದನ ಅವನು ತನ್ನ ರಾಜ್ಯಕಾರ ಭಾರವನ್ನು ನೋಡಿಕೊಂಡು ತನಗೆ ಉಳಿದ ಯಾನೆತ್ಸು ಸ್ರ ವೇಳೆಯನ್ನು 3 ಪರಮೇ ಶ್ವರನ ಭಜನೆಯಲ್ಲಿ ಕಳೆಯುತ್ತಿದ್ದನು. ಅವನು ಮಹಾ ಶಿವಭಕ್ತನಿದ್ದನು ಅವನು ನಿತ್ಯ ಪ್ರಾತಃಕಾಲದಲ್ಲಿ ಒಂದು ಪ್ರಹರ ರಾತ್ರಿಯು ಇರುವಾಗ್ಗೆ ಎದ್ದು ಪ್ರಾತರ್ವಿಧಿಯನ್ನು ಮುಗಿಸಿಕೊಂಡು, ಸ್ನಾನವನ್ನು ಮಾಡಿ ಸೋಡಶೋಪ ಚಾರದಿಂದ ಶಿವಪೂಜೆಯನ್ನು ಮಾಡಿ, ಪೂಜೆಯು ಮುಗಿದ ನಂತರ ವ್ಯಾಯಾ ಮವನ್ನು ಮಾಡಿ, ಅಲ್ಪಾಹಾರವನ್ನು ಮಾಡುತ್ತಿದ್ದನು. ಈ ಯಾವತ್ತು ನಿತ್ಯ ಕರ್ಮಗಳು ಮುಗಿದ ತರುವಾಯ ಅವನು ತನ್ನ ರಾಜ್ಯಕಾರಭಾರವನ್ನು ಮಾ ಡುತ್ತಿದ್ದನು. ಪ್ರದೋಷ ಕಾಲದಲ್ಲಿ ( ಸಾಯಂಕಾಲದಲ್ಲಿ) ಅವನು ಪುನಃ ಸ್ನಾನ ಮಾಡಿ ಶಿವಪೂಜೆಯನ್ನು ಮಾಡುತ್ತಿದ್ದನು. ಅವನು ತಾನು ಯಾವ ಕೆಲಸವನ್ನು ಮಾಡುತ್ತಿದ್ದಾ ಗ್ಯೂ ಶಿವನ ಚರಣದ ಧ್ಯಾನವನ್ನು ಒಂದು ಕಣ ಹೊತ್ತು ಸಹ ಮಾಡದೆ ಇರುತ್ತಿದ್ದಿಲ್ಲ.
ಐಶ್ವರ್ಯವು ಮತ್ತು ಅಧಿಕಾರವು ಇದ್ದ ಮನುಷ್ಯನಿಗೆ ಬಹುಶಃ ಬುದ್ಧಿ ಭ್ರಂಶವಾಗಿ ಅವನ ಮನಸ್ಸು ಅವನನ್ನು ಯಾ ವಾಗಲು ದುರ್ವ್ವಸನದ ಕಡೆಗೆ ಅಥನಾ ಹಾಪಕೃತ್ಯದ ಕಡೆಗೆ ಎಳೆಸುವದು. ಅನನ ಕಣ್ಣಿನ ಮೇಲೆ ಸೊಕ್ಕಿನ ಪರೆಯು ಬರು ವದು. ಜಗತ್ತಿನಲ್ಲಿ ತನ್ನಕಿಂತ ಹೆಚ್ಚಿನನರು ಯಾರೂ ಇಲ್ಲೆಂದು ಅವನಿಗೆ ಶೋರಲಿಕ್ಕೆ ಹತ್ತುವದು. €" ಸಂಕಟಿ ಬಂದಾಗ ನೆಂಕ ಬರಮಣ,? ತ ದಾರಿದ್ಭ್ಯವು ಅಥವಾ ದುಃಖವು ಬಂದಾಗ್ಗೆ ಮನುಷ್ಯನು ಕ್ಷಣ ಕ್ಷಣಕ್ಕೆ ಪರಮೇಶ್ವರನ ಹೆಸರು ತೆಗೆದುಕೊ
ಳ್ಳುವನು. ಆದರೆ ಆ ದುಃಖವು ಅಥವಾ ದಾರಿದ್ಭ್ಯವು ನಿನಾಕೆಣ ವಾದ ಕೂಡಲೆ ಅನನಿಗೆ ಪರಮೇಶ್ವರನ ಸ್ಮರಣವು ಸಹ ಉಳಿ ಯುವದಿಲ್ಲ. ಆದುದರಿಂದಲೇ ಸಾಧು ಸಜ್ಜನರು ಐಶ್ಚರ್ಯವ ನ್ನೂ ಅಧಿಕಾರವನ್ನೂ ಧಿಕ್ಕರಿಸುತ್ತಾರೆ. ಅಧಿಕಾರ ಮತ್ತು ಐಶ್ವ ರ್ಯಗಳಲ್ಲಿ ಇಂಥ ಉನ್ಮತ್ತ ಗುಣವು ಇರುವದರಿಂದ ಇವುಗಳು ಇದ್ದಾಗ್ಯೂ ಯಾವನಲ್ಲಿ ಉನ್ಮತ್ತತನವು ಬರುವದಿಲ್ಲವೋ ಅಂಥ ವನೇ ಧನ್ಯನು! ಅಂಥವನೇ ಪೂಜ್ಯನು!
ಇಂಥ ಧನ್ಯ ಮತ್ತು ಪೂಜ್ಯರಾದ ಮನುಷ್ಯರೊಳಗೆ ಶ್ರೀಯಾಳರಾಜನ ಸಮಾವೇಶವಿರುವದು. ಈ ಪ್ರಕಾರ ಪರಮೇಶ್ವರನ ಭಕ್ತಿ ಯಲ್ಲಿ ತಲ್ಲೀನರಾಗಿ ರುವವರಲ್ಲಿ ಯಾವತ್ತು ಸದ್ಗುಣಗಳು ವಾಸವಾಗಿರುವದು ಸ್ವಾಭಾವಿಕನಿರು ವಂತೆ ಶ್ರೀಯಾಳರಾಜನಲ್ಲಿ ಯಾವತ್ತು ಸದ್ಗುಣಗಳು ವಾಸವಾಗಿದ್ದವು. ಯಾ ವತ್ತು ಪ್ರಾಣಿಮಾತ್ರರ ಬಗ್ಗೆ ಅವನಲ್ಲಿ ಅತ್ಯುಂತ ದಯವ್ರ ಇತ್ತು . ಅವನು ತನ್ನ ಜೇವದಂತೆಯೇ ಎರಡನೆಯವರ ಚೀವವೆಂದು ತಿಳಿದುಕೊಂಡು ಯಾರಿ ಗೂ ತನ್ನಿಂದ ಕಿಂಚಿತ್ತಾದರೂ ದುಃಖವಾಗಬಾರದೆಂದು ಬಹಳ ದಕ್ತತೆ ಯಿಂದ ನಡೆಯುತ್ತಿ ದ್ದನು. ಯಾವನಾದರೂ ದುಃಖಪೀಡಿತ ಮನುಷ್ಯನು ಅವನನ್ನು ಕಾಣಲಿಕ್ಕೆ ಬಂದರೆ ಅವನ ಜೀವವು ಬಹಳ ತಳಮಳಿಸಿ ಹೋಗು ತ್ತಿತ್ತು. ದುಃಖನೀಡಿತರ ದುಃಖವನ್ನು ನಿವಾರಣ ಮಾಡುವ ವಿಷಯದಲ್ಲಿ ಅವನು ಯಾವಾಗಲು ತತ್ಪರನಿರುತ್ತಿದ್ದನು. ಪರದುಃಖ ನಿವಾರಣ ಮಾಡುವ ದರಿಂದ ತನಗೆ ಎಷ್ಟು ಕಷ್ಟವಾದಾಗ್ಯೂ ಅವನು ಅದರ ಕಡೆಗೆ ಏನೂ ವಿಚಾರ ಮಾಡುತ್ತಿದ್ದಿ ಲ್ಲ. ಜನರ ಸೌಖ್ಯದ ಕಡೆಗೆ ಲಕ್ಷ್ಯ ಕೊಡುವದರಿಂದಲೇ ಅವ ನಿಗೆ ಯಾವಾಗಲು ಸಮಾಧಾನವು ಮತ್ತು ಸಂತೋಷವು ಉಂಟಾಗುತ್ತಿದ್ದ ವು. ಅವನಲ್ಲಿ ದಯಾಳುತನವು ಇದ್ದಂತೆಯೇ ಕ್ಷಮೆ, ಶಾಂತಿ, ಧರ್ಯ, ಔದಾರ್ಯ
ಗ)
ಮುಂತಾದ ಸದ್ಗುಣಗಳು ಇದ್ದವು. ಎರಡನೆಯವರು ತನಗೆ ಎಷ್ಟು ಅಪರಾ ಧವನ್ನು ಮಾಡಿದಾಗ್ಯೂ ಅವನು ಅಂಥವರ ಮೇಲೆ ಸೇಡು ತೀರಿಸಿಕೊಳ್ಳು ವ ಬಗ್ಗೆ ತನ್ನ ಮನಸ್ಸಿನಲ್ಲಿ ಎಂದೂ ವಿಚಾರ ಮಾಡುತ್ತಿದ್ದಿ ಲ್ಲ. ಸುಖವು ಬಂ ದಾಗ ಸೊಕ್ಕಿನಿಂದ ಉಬ್ಬಿ ಹೋಗಿ ದುಃಖವು ಬಂದಾಗ ಕಸವಿಸಿ ಮಾಡಿ ಅಳುತ್ತ ಕುಳಿತುಕೊಳ್ಳುವದು ಸಾಮಾನ್ಯ ಮನುಷ್ಯರ ಗುಣವಿರುವದು. ಆದರೆ ಪರಮೇಶ್ವರನ ಭಕ್ತರು ಸುಖ ದುಃಖ ಗಳನ್ನೂ ಲಾಭ ಹಾನಿಗಳನ್ನೂ ಸಮನಾಗಿಯೇ ತಿಳಿದುಕೊಂಡು ಎರಡೂ ಕಾಲದಲ್ಲಿ ಶಾಂತಿಯಿಂದಲೇ ಆಚರಣ ಮಾಡುವರು. ಅವರು ತಮಗೆ ದುಃಖವು ಬಂದಾಗ್ಗೆ ಎಳ್ಳೆಷ್ಟಾದರೂ ಎದೆಗುಂ ದದೆ ಧೈರ್ಯದಿಂದಲೇ ಆ ದುಃಖವನ್ನು ನಿವಾರಣ ಮಾಡಲಿಕ್ಕೆ ಪ್ರುಯತ್ನಮಾಡುವರು. ಬೇಕಾದವರು ಬೇಕಾದುದನ್ನು ಬೇಡಲಿಕ್ಕೆ ಬಂದಾಗ್ಯೂ ಶ್ರೀಯಾಳನು ಅವರನ್ನು ಎಂದೂ ರಿಕ್ತ ಹಸ್ತದಿಂದ ತಿರುಗಿ ಕಳಿ ಸುತ್ತಿದ್ದಿಲ್ಲ. ಪ್ರವಾಸಿಗರಿಗಾಗಿಯೂ ಯಾತ್ರಸ್ಮರಿಗಾಗಿಯೂ ಅವನು ಅಲ್ಲಲ್ಲಿ ಅನ್ನಭತ್ರಗಳನ್ನು ಮತ್ತು ಅರವಟಗೆಗಳನ್ನು ಇಡಿಸಿದ್ದನು. ಯಾಚಕರಿಗೆ «ಇಲ್ಬ' ವೆಂದು ಉತ್ತರ ಕೊಟ್ಟು ಅವರನ್ನು ವಿನ್ಮುಖರಾಗಿ ಮಾಡಿ ಕಳುಹಿ ಸುವದು ಎಷ್ಟು ಪಾಪವೋ ಅಷ್ಟೇ ಕಾರಣವಿಲ್ಲದೆ ಯಾಚನೆ ಮಾಡುವದು ಅಥವಾ ಎರಡನೆಯವರಲ್ಲಿ ಬಾಯಿ ತೆಗೆದು ಬೇಡುವದು ಪಾಪವೆಂದು ಶಾಸ್ತ್ರ ದಲ್ಲಿ ಹೇಳಿರುತ್ತದೆ. ಆದುದರಿಂದ ಶ್ರೀಯಾಳರಾಜನ ಕಾಲದಲ್ಲಿ ಬಿಕ್ಷೆ ಬೇಡು ವದು ಜೀವನದ ಒಂದು ಉದ್ಯೋಗವು ಅಥವಾ ವೃತ್ತಿಯು ಆಗಿದ್ದಿಲ್ಲ. ಕುಂ ಟರು, ಕುರುಡರು, ಮೂಕರು, ಅನಾಥರು, ಅವಯವಹೀನರು, ನಿರ್ಬಲರು ಅಥವಾ ಸಂಕಟದಲ್ಲಿ ಬಿದ್ದವರು ಮಾತ್ರ ಆ ಕಾಲದಲ್ಲಿ ಯಾಚನೆಯನ್ನು ಮಾ ಡುತ್ತಿದ್ದರು. ಇಂಥ ಜನರಿಗೆ ಸಹಾಯ ಮಾಡುವದು ಯಾವಾಗಲು ಪುಣ್ಯ ಪ್ರದವೇ ಆಗಿರುವದು. ಆ ಕಾಲದಲ್ಲಿ ಪ್ರವಾಸಿಗರಿಗೂ ಯಾತ್ರಸ್ಥರಿಗೂ ಮಾ
ಎ (ತ್ರಿಕ ಅಡ
ರ್ಗದಲ್ಲಿ ಬಹಳ ಪ್ರಯಾಸವು ತಬ್ಬುತ್ತಿತ್ತು. ಆದುದರಿಂದ ಅಂಥವರಿಗೆ ಸಹಾ ಯ ಮಾಡುವದು ಬಹಳ ಪುಣ್ಯವೆಂದು ಧರ್ಮಶಾಸ್ತ್ರದಲ್ಲಿ ಹೇಳಿದ್ದ ರ ಮರ್ಮ ವು ಇದೇ ಇರುತ್ತದೆ. ಗಾಯನದ ಕಾಲಕ್ಕೆ ಗಾಯನ ವಾದನ ಮಾಡುವ ವರು ಒಂದೇ ಸ್ವರದಿಂದ ಮತ್ತು ಒಂದೇ ತಾಳಗತ್ತಿ ನಿಂದ ಮಾಡಿದರೆ ಅದ ರಿಂದ ಹೇಗೆ ಕರ್ಣಾನಂದವಾಗುವದೋ ಹಾಗೆ ಸಂಸಾರದಲ್ಲಿ ಪತಿಪತ್ನಿಯರ ಮನಸ್ಸು ಧರ್ಮದ ಕಡೆಗೆ ಮತ್ತು ಪರೋಪಕಾರದ ಕಡೆಗೆ ಒಂದೇಸವನಾಗಿ ಇದ್ದರೆ ಅವರ ಕಡೆಯಿಂದ ಗೃಹಸ್ಕಾಶ್ರಮದ ಕೆಲಸಗಳು ಉತ್ತಮವಾಗಿ ಜರಗುವವು. ಪತಿಸತ್ಲಿಯರಲ್ಲಿ ಒಬ್ಬರು ಯಾರಾದರೂ ಕ್ಷುದ್ರ ಮನ ಸ್ಸಿನವರು ಅಂದರೆ ಪರಹಿತದ ಕಡೆಗೆ ದೃಷ್ಟಿಯನ್ನಿಡದೆ ಕೇವಲ ಸ್ವಾರ್ಥದ ಕಡೆಗೆ ನೋಡುವವರು ಇದ್ದರೆ ಅಂಥ ಪತಿಪಶ್ನಿ ಯರ ಕಡೆಯಿಂದ ಸಾಕಷ್ಟು ಧರ್ಮಕಾರ್ಯವು ಅಥವಾ ಪುಣ್ಯ ಕಾರ್ಯವು ಲಭಿಸುವದಿಲ್ಲ. ಒಂದೇ ತರದ ಧಾರ್ಮಿಕ ಭಾವನೆ ಯುಳ್ಳ ಪತಿಪತ್ಸಿಯರ ಜೋಡಿಯು ಕೂಡಬೇಕಾದರೆ ಹಿಂದಿನ ಜನ್ಮದ ಪುಣ್ಯವು ಇರಬೇಕಾಗುವದು. ಇಂಥ ಪುಣ್ಯವು ಇದ್ದುದರಿಂ ದಲೇ ಶ್ರೀಯಾಳರಾಜನ ಪತ್ನಿಯಾದ ಚಾಂಗುಣಿಯು ಅವನಂತೆಯೇ ಬಹಳ ಧಾರ್ಮಿಕಳೂ ಈಶ್ವರ ಭಕ್ಕಳೂ ಆಗಿದ್ದಳು. ಅದುದರಿಂದ ಈ ಗಂಡ ಹೆಂಡ ರಿಬ್ಬ ರು ಪರೋಪಕಾರದ ಅಥವಾ ಧರ್ಮದ *ೆಲಸದಲ್ಲಿ ಯಾವಾಗಲು ತಮ್ಮ ಕೈಯನ್ನು ಮುಂದೆ ಮಾಡುತ್ತಿದ್ದರು. ಚಾಂಗುಣಿಯು ತನ್ನ ಕೈಯನ್ನು ಶ್ರೀಯಾಳರಾಜನಕಿಂತಲು ಒಂದು ಸ್ವಲ್ಪ ಮುಂದೆಯೇ ಮಾಡಿರುತ್ತಿ ದ್ವಳೆಂದು ಹೇಳಿದರೆ ಏನೂ ತಪ್ಪಾಗದು.
ಈ ಇಬ್ಬರಿಗೆ ಚಿಲ್ಲಾಳನೆಂಬ ಒಬ್ಬನೇ ಮಗನು ಇರುತ್ತಿದ್ದನು. "ಭೂಮಿಯಂತೆ ಸಸಿಯು ಅಥವಾ ಬೀಜದಂತೆ ಅಂಕುರವು'
— ೬ —
ಎಂಬ ನಾಣ್ಣುಡಿಯು ಸುಳ್ಳಲ್ಲ. ಈ ಚಿಲ್ಲಾಳ ಬಾಲಕನು ತನ್ನ ಪುಣ್ಯಶೀಲ ರಾದ ತಂದೆ ತಾಯಿಗಳಂತೆಯೇ ಸದಾಚರಣಿಯೂ, ಪಾಪಭೀರುವೂ, ಈಶ್ವರ ಭಕ್ತನೂ, ಬಹು ಉದಾರನೂ, ತನ್ನ ಮನೆತನಕ್ಕೆ ಮತ್ತು ತನ್ನ ತಂದೆ ತಾಯಿ ಗಳಿಗೆ ಬಹಳ ಭೂಷಣಪ್ರಾಯನೂ ಇದ್ದನು. ಅವನು ಅಕ್ಬರಶಃ ಕುಲದೀ ಪಕನೇ ಆಗಿದ್ದನು. ಅದುದರಿಂದ ಶ್ರೀಯಾಳ, ಚಾಂಗುಣಿ ಮತ್ತು ಚಿಲ್ಲಾಳ ಈ ಮೂರೂ ಜನರ ಸಂಗಮವ್ರ ಪುಣ್ಯಪ್ರದವಾದ ತ್ರೀವೇಣೀ ಸಂಗಮವೇ ಆಗಿತ್ತೆಂದು ಹೇಳಲಿಕ್ಕೆ ಅಡ್ಡಿಯಿಲ್ಲ.
ಕಾರಾ
ಶೀ ಶಂಕರನೂ ನಾರದನೂ.
ಒಂದಾನೊಂದು ದಿವಸ ಶ್ರೀ ಶಂಕರನು ಪಾರ್ವತೀ ಸಮೇತನಾಗಿ ಕೈಲಾಸದಲ್ಲಿ ಸ್ವಸ್ಥೃವಾಗಿ ಕುಳಿತುಕೊಂಡಾಗ್ಸೆ ನಾರದಮುನಿಯು ಸಂಚರಿ ಸುತ್ತ, ಸಂಚರಿಸುತ್ತ, ತನ್ನ ಕೈಯಲ್ಲಿ ವೀಣೆಯನ್ನು ಹಿಡಿದುಕೊಂಡು, ಅದನ್ನು ಬಾರಿಸುತ್ತಲೂ, ಬಾಯಿಂದ ಹರಿಭಜನವನ್ನು ಮಾಡುತ್ತಲೂ, ಅಲ್ಲಿಗೆ ಹೋದ ನು. ನಾರದನು ಅಲ್ಲಿಗೆ ಹೋದ ಕೂಡಲೆ ಶ್ರೀ ಶಂಕರನು ಅವನಿಗೆ ಅದರ ಮಾಡಿ ಕುಳಿ ೈರಿಸಿಕೊಂಡನು. ಆಗ ಉಭಯತರು ತಮ್ಮ ಕುಶಲ ವರ್ತಮಾನಗ ಳನ್ನು ಮಾತಾಡಿದನಂತರ ಅಲ್ಲಿಯ ಇಲ್ಲಿಯ ಮಾತುಗಳನ್ನು ಆಡುತ್ತಿರುವಾಗ್ಗೆ ನಾರದನು ಶಿ ಶ್ರೀ ಶಂಕರನ ಮುಂದೆ ಶಿ ಶ್ರೀಯಾಳರಾಜನ ಸು ತಿಯನ್ನು ಬಹಳ ವಾಗಿ ಮಾಡಿದನು. ನಾರದನು ಅಂದದ್ದೇನಂದರೆ:--“ ಎಲೌ ಕೈಲಾಸನಾ ಥಾ! ಗಂಗಾಧರಾ! ಪಿನಾಕಪಾಣೀ! ಭಕ್ತವತ್ಸಲಾ! ನಾನು ತ್ರಿಲೋಕದಲ್ಲಿ ಸಂಚಾರಮಾಡಿ ನಿನ್ನ ಅನೇಕ ಮಂದಿ ಭಕ್ತ ರನ್ನು ನೋಡಿದೆನು. ಅದರೆ ಶ್ರೀ ಯಾಳನಂಥ ನಿನ್ನ ಭಕ್ತ ನನ್ನು ನಾನು ಎಲ್ಲಿಯೂ ನೋಡಲಿಲ್ಲ. ಅವನಲ್ಲಿಯ
ಡಿ
ಧೈರ್ಯ, ಔದಾರ್ಯ, ಗಾಂಭೀರ್ಯ, ದಯಾ, ಕುಮಾ, ಶಾಂತಿ ಈ ಸದ್ಗುಣ ಗಳು ಅದ್ವಿತೀಯವಿರು ನವು. ಅವನಿಗೆ ಸರಿಯಾದವರು ಯಾರೂ ಇಲ್ಲ. ಅವನು ಇವತ್ತಿಗೆ ಹಕ್ಕು ಸಾವಿರ ಅನ್ನಛತ್ರಗಳನ್ನು ಇಟ್ಟಿರುತ್ತಾನೆ. ಅವನ ಬಳಿಯಲ್ಲಿ ಯಾವದೇ ಬ್ರಾಹ್ಮಣರು, ಜಂಗಮರು, ಅತಿಥಿಗಳು, ಅಭ್ಯಾಗತರು ಹೋದಾಗ್ಯೂ ಅವನು ಅವರಿಗೆ ಇಚ್ಛಾಭೋಜನವನ್ನು ಮಾಡಿಸುತ್ತಾನೆ. ಅತಿಥಿಗಳು ಭೋಜನಕ್ಕೆ ಕುಳಿತಾಗ್ಗೆ ಅವರು ಬೇಡಿದ ಪದಾರ್ಥಗಳನ್ನು ವಿಶ್ವ ಪ್ರಯತ್ನ ಮಾಡಿ ಅವರಿಗೆ ತಂದು ಬಡಿಸಿ ಅವರ ಇಚ್ಛೆಯನ್ನು ಪೂರೈಸುವದು ಅವನ ವ್ರತವಿರುತ್ತದೆ. ಅಂಥ ಅತ್ಯಂತ ಧಾರ್ಮಿಕನಾದ ನಿಮ್ಮೀ ಭಕ್ತನು ಊರ್ವೀತಲದ ಮೇಲೆ ಇರುತ್ತಿ ರಲು ಅವನನ್ನು ನೀವು ಇನ್ನೂ ವರೆಗೆ ಜನ್ಮ ಮರಣಗಳ ಚಕ್ರದಿಂದ ಬಿಡಿಸಿ ನಿಮ್ಮ ಪಾದದ ಹತ್ತರ ತಂದುಕೊಳ್ಳದೆ ಇರು ವದು ಬಹಳ ಆಶ್ಚರ್ಯದ ಸಂಗತಿಯದೆ.! ? ಇದಕ್ಕೆ ಶ್ರೀ ಶಂಕರನು ಉತ್ತರ ಕೊಬ್ಬದ್ದೇನಂದರೆ:.. ಎಲೌ ನಾರದಮುನಿಯೇ! ನೀನು ಹೇಳುವದೆಲ್ಲ ನಿಜ ವಿರುವದು. ಆದರೆ ಅವನು ಎಂಥ ಕಠಿಣ ಪ್ರಸಂಗದಲ್ಲಿಯೂ ತನ್ನ ಸದಾಚರ ಣದಿಂದ ಭ್ರಷ್ಟನಾಗುವದಿಲ್ಲೆ ಂಬ ಬಗ್ಗೆ ಅವನ ಸತ್ವಪರೀಕ್ಷೆಯನ್ನು ನಾನು ಮಾಡತಕ್ಕವನಿದ್ದೇನೆ. ಆ ಪರೀಕ್ಷೆಯಲ್ಲಿ ಅವನು ತೇರ್ಗಡೆಯಾದನೆಂದರೆ ನಾನು ಅವನನ್ನು ಈ ಲೋಕಕ್ಕೆ ತರುವೆನು. ವರಿಹಚ್ಚಿ ಪರೀಕ್ಷಿಸದೆ ಯಾರ ಮೇಲೂ ಕೃಪೆಯನ್ನು ಮಾಡುವದು ಸರಿಯಾದುದಲ್ಲ. ಪರೀಕ್ಷೆಯ ಪ್ರಸಂ ಗವು ಬರುವತನಕ ಸನ್ಮಾರ್ಗದಿಂದ ನಡೆಯುವವರು ಅನೇಕ ಮಂದಿ ಸಿಗು ವರು. ಆದರೆ ಅಂಥ ಪ್ರಸಂಗವು ಬಂದಕೂಡಲೆ ತಮ್ಮ ಶೀಲವನ್ನು ಭ್ರಷ್ಟ ಮಾಡದೆ ಇರುವವರು ಬಹಳ ವಿರಲ. ಲಕ್ಷದಲ್ಲಿ ಒಬ್ಬರು ಅಂಥವರು ಸಿಗು ವರು. ಮೋಹದಲ್ಲಿ ಶಿಲ್ಕುವ ಪರಿಯಂತರ ತಮ್ಮ ಬಾಯಿಂದ ಧರ್ಮದ ಮತ್ತು ನೀತಿಯ ಜೊಳ್ಳು ಕೊಚ್ಚುವವರು ಅನೇಕರು ಇರುತ್ತಾ ಜೆ ಪ್ರಸಂ
ಹ 3.3
ಗವು ಬಂದಾಗ್ಗೆ ವಜ್ರವು ಯಾವದು ಮತ್ತು ಕಾಜು ಯಾವದು ಎಂಬುವದರ ಪರೀಕ್ಷೆಯು ಆಗುತ್ತದೆ. ಪರೀಕ್ಷೆಯ ಹೊರತು ಯಾವತ್ತು ಮ್ಯರ್ಥವಿರುತ್ತದೆ. ಪರೀಕ್ಷೆಯನ್ನು ಮಾಡುವಾಗ ಪರೀಕ್ಷೆಯನ್ನು ಮಾಡುವವರು ಕೇವಲ ನಿರ್ದ ಯಿಗಳೆಂದು ಅನ್ಯರಿಗೆ ಭಾಸವಾಗುವದು. ಆದರೆ ಒಮ್ಮೆ ಇಂಥ ಸತ್ವಪರೀ ಕ್ಷೆಯಲ್ಲಿ ತೇರ್ಗಡೆಯಾದರೆ ಅವರಿಗೆ ಅಕ್ರಯ್ಯ ಸುಖವು ಪ್ರಾಪ್ಮವಾಗುವದು. ಪರೀಕ್ಷೆಯ ಕಾಲಕ್ಕೆ ಅವರು ಅನುಭೋಗಿಸಬೇಕಾಗುವ ಯಾತನೆಗಳು ಅವ ರಿಗೆ ಆಮೇಲೆ ಪ್ರಾಸ್ಮ ವಾಗುವ ಅಕ್ಬಯ್ಯು ಸುಖದ ಮುಂದೆ ಏನೂ ಅಲ್ಲ. ಅಗ್ನಿಯಲ್ಲಿ ಹಾಕದೆ ಚಿನ್ನದ ನಿಜಸ್ವರೂಪವು ಗೊತ್ತಾಗುವದಿಲ್ಲ. ಏಕೆ ನಾರದಾ? ಈ ನನ್ನ ಮಾತಿನ ಸತ್ಯುತೆಯ ಬಗ್ಗೆ ನಿನ್ನ ಅಭಿಪ್ರಾಯವೇನದೆ? ”
ಅಮೇಲೆ ನಾರದನು ಉತ್ತರ ಕೊಬ್ಬದ್ದೇನಂದರೆ:.-4 ಭೋ ಪಾರ್ವ ತೀರಮಣಾ! ಕೈಲಾಸನಾಥಾ! ನೀನು ಹೇಳಿದ್ದು ಅಕ್ಸರಶಃ ನಿಜವು. ನೀನು ಹೇಳಿದ ಪ್ರಕಾರ ಮೃ ತ್ಯುಲೋಕದಲ್ಲಿ ಬಾಯಿಂದ ಧರ್ಮದ ಮತ್ತು ನೀತಿಯ ನುಡಿಗಳನ್ನು ವೆಗ್ಗಳವಾಗಿ ನುಡಿದು ಪ್ರಸಂಗ ಬಂದಾಗ್ಗೆ ಆ ನುಡಿಗಳಿಗೆ ವಿಸಂ ಗತವಾಗಿ ನಡೆಯುವವರು ಅನೇಕ ಮಂದಿ ಇರುತ್ತಾರೆ. ಆದರೆ ಶ್ರೀಯಾಳ ನಿಗೆ ಇಂಥ ದೋಷಾರೋಪಣವನ್ನು ಮಾಡುವದು ಶುದ್ಧ ಪಾಪ ಪವದೆ. ಶ್ರೀ ಯಾಳನು ನಿಮ್ಮ ಸತ್ವಪರೀಕ್ಷೆಯಲ್ಲಿ ನಿಶ್ಚಯವಾಗಿ ಜಯಶೀಲನಾಗುವನೆಂದು ನನಗೆ ಸಂಪೂರ್ಣ ವಿಶ್ವಾಸವುಂಟು. ”
ಆ ಮೇಲೆ ಶ್ರೀ ಶಂಕರನು ನಾರದನಿಗೆ ಹೇಳಿದ್ದೇನಂದರೆ:-.-4" ನಾರದ ಮುನಿಯೇ! ನೀನು ವರ್ಣಿಸಿದಂತೆ ಅ ನನ್ನ ಭಕ್ತನಾದ ಶ್ರೀಯಾಳರಾಜನು ಇರುವದೇ ಆದಲ್ಲಿ ನನಗೆ ಪರಮಸಂತೋಷವಾಗುವದು. ನನ್ನ ಭಕ್ತರಲ್ಲಿ ಇಂಥ ಪುಣ್ಯಕ್ಲೋಕರು ಎಷ್ಟು ಮಂದಿ ಹೊರಡುವರೋ ಅಷ್ಟು ನನಗೆ ಹೆಚ್ಚು ಅಭಿಮಾನದ ಮತ್ತು ಆನಂದದ ಸಂಗತಿಯು ಇರುತ್ತದೆ. ಆದುದರಿಂದ
ಅವ ಗಗನ
ನಾನು ಇನ್ನು ವಿಲಂಬ ಮಾಡದೆ ನನ್ನ ವೇಷಾಂತರವನ್ನು ಮಾಡಿಕೊಂಡು ಆ ಶ್ರೀಯಾಳರಾಜನ ಸತ್ವೃಪರೀಕ್ಷೆಯ ಬಗ್ಗೆ ಹೊರಟು ಹೋಗುವೆನು. ”
ಈ ಪ್ರಕಾರ ಭಾಷಣವಾದ ನಂತರ ನಾರದನು ಇನ್ನೂ ಕೆಲವು ಇತರ ಮಾತುಗಳನ್ನಾಡಿ ಶ್ರೀ ಶಂಕರನ ಅಪ್ಪಣೆಯನ್ನು ಪಡೆದುಕೊಂಡು ಕೈಲಾಸ ದಿಂದ ಹೊರಟು ಹೋದನು.
ಆ
ಕ. ಸತ್ವಪರೀಕ್ಷೆಯು. ——ADS—
ಆ ಬಳಿಕ ಶ್ರೀ ಶಂಕರನು ಒಬ್ಬ ವೃದ್ಧ ಮತ್ತು ಅಶಕ್ತ ವಿಪ್ರನ ವೇಷ ವನ್ನು ಧರಿಸಿ ಬಡಿಗಿಯನ್ನು ಊರುತ್ತ ಊರುತ್ತ ಬಹಳ ಕಷ್ಟದಿಂದ ಶ್ರೀಯಾ ಳರಾಜನ ಬಾಗಿಲಕ್ಕೆ ಬಂದನು, ಅಲ್ಲಿ ಶ್ರೀಯಾಳರಾಜನು ಆ ವಿಪ್ರನನ್ನು ಬಹಳ ಆದರಸತ್ಯಾರದಿಂದ ಒಳಗೆ ಕರೆದುಕೊಂಡು ಹೋಗಿ ಯೋಗ್ಯ ಸ್ಥಳದ ಮೇಲೆ ಕುಳ್ಳಿರಿಸಿದನು. ಅಲ್ಲಿ ಆ ವಿಪ್ರನು ಕೆಲವು ಹೊತ್ತು ವಿಶ್ರಾಂತಿಯನ್ನು ತೆಗೆದುಕೊಂಡನಂತರ ಶ್ರೀಯಾಳನು ಆ ಅತಿಥಿಯ ಮುಂದೆ ತನ್ನ ಎರಡೂ ಕೈ ಜೋಡಿಸಿ ವಿನಯದಿಂದ--*“ ಸ್ವಾಮಿನ್, ತಮ್ಮ ಅಪೇಶ್ವೆಯು ಏನಿರು ತ್ತದೆ? ಎಂದು ಅವನಿಗೆ ಕೇಳಿದನು. ಆಗ ಅವನು--“ ರಾಜನೇ! ನಾನು ಬಹಳ ದಿವಸಗಳಾರಭ್ಯು ಉಪವಾಸದಿಂದ ಬಳಲುತ್ತೇನೆ. ನನಗೆ ಇಚ್ಛಾಭೋ ಜನವನ್ನು ಮಾಡಿಸು. ನಾನು ನಿನ್ನ ಕೀರ್ತಿಯನ್ನು ಕೇಳಿ ಬಹಳ ಆಶಾತುರ ನಾಗಿ ಬಂದಿರುತ್ತೇನೆ” ಎಂದು ನುಡಿದನು. ಆಗ ರಾಜನು" ಸ್ವಾಮಿನ್! ಯಾವ ಪದಾರ್ಥಗಳ ಮೇಲೆ ತಮ್ಮ ಅಪೇಶ್ಷೆಯುಂಟೆಂಬುದನ್ನು ದಯ ಮಾಡಿ ನನಗೆ ತಿಳಿಸಬೇಕು. ತಮ್ಮ ಅಪೇಕ್ಷೆಯುನ್ನು ಪೂರೈಸಲಿಕ್ಕೆ ಈ ದೀನ ಕಿಂಕರನು ಒಂದೇ ಕಾಲಿನ ಮೇಲೆ ಸಿದ್ಧ ನಿರುತ್ತಾನೆ” ಎಂದು ಕೇಳಿದನು.
೨. ಗಿ೦ ೨_
ಅದಕ್ಕೆ ಆ ಆತಿಥಿಯು-.-" ರಾಜನೇ! ನಿನ್ನ ನಮ್ರತೆಯನ್ನೂ ಅದರಸತ್ಯಾರ ವನ್ನೂ ನೋಡಿ ನನಗೆ ಬಹಳ ಸಮಾಧಾನವಾಗಿರುತ್ತದೆ. ನನ್ನ ಅಪೇಕ್ಷೆಯು ಏನುಂಟೆಂಬುವದನ್ನು ಕೇಳಿಕೋ. ನನಗೆ ನರಮಾಂಸವನ್ನು ಭುಂಜಿಸಬೇ ಕೆಂಬ ಅಪೇಕ್ಷೆಯುಂಬಾಗಿರುತ್ತದೆ. ಆದರೆ ಆ ನರಮಾಂಸವ್ರ ಕಳ್ಳ, ಚಾಂ ಡಾಲ ಅಥವಾ ಪಾಪಿಷ್ಕ ಮನುಷ್ಯನದು ಇರಬಾರದು; ಅಥವಾ ಕ್ರಯಕೊ ಟ್ಟು ತಂದ ಮಾಂಸವಾದರೂ ಇರಬಾರದು? ಎಂದು ಉತ್ತರ ಕೊಟ್ಟನು. ಆ ಬಳಿಕ ರಾಜನು--" ಸ್ವಾಮಿನ್! ತಾವು ತಮ್ಮ ಮನಸ್ಸಿನಲ್ಲಿ ಏನೂ ಸಂಕೋ ಚವನ್ನು ಮಾಡಿಕೊಳ್ಳಬಾರದು. ತಮ್ಮ ಅಪೇಕ್ಷೆಯು ಬೇಕಾದದ್ದು ಇದ್ದಾ ಗ್ಯೂ ಅದನ್ನು ಸ್ಪಷ್ಟವಾಗಿ ತಿಳಿಸಬೇಕು. ನಾನು ತಮ್ಮ ಮನೋರಥವನ್ನು ಪೂರ್ಣ ಮಾಡಲಿಕ್ಕೆ ಸಿದ್ಧ ನಿರುತ್ತೇನೆ” ಎಂದು ಹೇಳಿದನು. ಇದನ್ನು ಕೇಳಿ ಶ್ರೀ ಶಂಕರನು ಅತ್ಯಂತ ಪ್ರಸನ್ನತೆಯಿಂದ....« ರಾಜನೇ! ನೀನು ನನ್ನ ಮ ನೋರಥವನ್ನು ಪೂರೈಸಲಿಕ್ಕೆ ಸಿದ್ಧನಿದ್ದರೆ ನಿನ್ನ ಮಾಯಾಮಮತೆಗಳನ್ನು ಬಿಟ್ಟು ಕೊಟ್ಟು ನಿನ್ನ ಪುತ್ರನಾದ ಚಿಲ್ಲಾಳನ ಮಾಂಸವನ್ನು ಕುದಿಸಿ ತಂದು ನನಗೆ ಬಡಿಸು. ಆ ಮಾಂಸವನ್ನು ನಿನ್ನ ಪತ್ನಿಯು ತನ್ನ ಸ್ವಂತ ಕೈಯಿಂದಲೇ ಅಡಿಗೆ ಮಾಡಿ ಅದನ್ನು ನನಗೆ ಬಡಿಸಬೇಕು. ಈ ಪ್ರಕಾರ ಮಾಡಿದರೆ ಮಾತ್ರ ನಾನು ಭೋಜನ ಮಾಡುವೆನು. ಇಲ್ಲದಿದ್ದರೆ ನಿನ್ನ ಸತ್ವವವನ್ನು ಹರಣ ಮಾಡಿ ನಾನು ಇಲ್ಲಿಂದ ಹೊರಟು ಹೋಗುವೆನು. ನಾನು ಕ್ಸುಧೆಯಿಂದ ಬಹಳ ಪೀಡಿತನಾಗಿರುವದರಿಂದ ವಿಲಂಬ ಮಾಡದೆ ನನಗೆ ಭೋಜನ ಮಾಡಿಸಿ ನಸ್ನನ್ನು ತೃಪ್ತಿಪಡಿಸು. ಇಲ್ಲದಿದ್ದರೆ ಇಗೋ ನೋಡು, ಇಲ್ಲಿಂದ ತೀವ್ರ ವಾಗಿ ಹೊರಟು ಹೋಗುವೆನು” ಎಂದು ಹೇಳಿದನು. ಶ್ರೀಯಾಳನು ಬಹಳ ವಿಚಾರಸಂಪನ್ನನು ಮತ್ತು ಧೈರ್ಯಶಾಲಿಯು ಇದ್ದಾಗ್ಯೂ ಅವನು ಆ ಅತಿ ಥಿಯ ಮಾತನ್ನು ಕೇಳಿ ಫುತ್ರಮೋಹದಿಂದ ಗೊಂದಲದಲ್ಲಿ ಬಿದ್ದನು. ಅವ
ಎ... ಗಿಗಿ
ನಿಗೆ ಕೆಲವು ಹೊತ್ತು ಏನೂ ಸೂಚಿಸದಂತೆ ಆಯಿತು. ಆದರೆ ಅವನು ಬಹಳ ಸತ್ವಶೀಲನು ಮತ್ತು ವಿಚಾರ ಸಂಪನ್ನನು ಇದ್ದ ಕಾರಣ ತನ್ನ ಯಾವತ್ತು
ದುಃಖವನ್ನು ನುಂಗಿಕೊಂಡು... ಸ್ವಾಮಿನ್! ನನಗೆ ಒಬ್ಬನೇ ಮಗನು ಇರುತ್ತಾ hy ನನ್ನ ಮಗನ ಮಾಂಸ ವೊಂದು ಮಾತ್ರ ಚೀಡಬಾರದು. ನನ್ನ ಸ್ವಂತ ದೇಹದ ಮಾಂಸವನ್ನು ನಾನು ತಮಗೆ ಸಂತೋಷದಿಂದ ಅರ್ಪಣ ಮಾಡುತ್ತೇನೆ. ಅದನ್ನು ತಾವು ಸ್ವೀಕಾರ ಮಾಡಬೇಕು ಎಂದು ಬೇಡಿ ಕೊಂಡನು. ಅದಕ್ಕೆ ಆ ಅತಿಥಿಯು-..« ರಾಜನೇ! ನಿನ್ನ ಮಾಂಸವು ನನಗೆ ಬೇಡ. ಅದನ್ನು ನಾನು ಕೈಯಿಂದ ಸಹ ಮುಟ್ಟಿ ಲಾರೆನು” ಎಂದು ನಿಷ್ಠುರ ವಾಗಿ ನುಡಿದನು. ಶ್ರೀಯಾಳನ ಪತ್ನಿಯಾದ ಚಾಂಗುಣಿಯು ಈ ಇಬ್ಬರ ಮಾತನ್ನು ಹೇಳಿ ಅಂತಃ ಪುರದಿಂದ ಹೊರಗೆ ಬಂದು ಸ ಸ್ವಾಮಿ, ಅತಿಥಿ ಮಹಾರಾಯರೇ, ತಮ್ಮ ಅಡ್ಡಿಯು ಇಲ್ಲದಿದ್ದರೆ ನಾನು ನನ್ನ ಸ್ವಂತ ದೇಹ ವನ್ನು ತಮ್ಮ ಚರಣಕಮಲಗಳಿಗೆ ಅರ್ಪಿಸಲಿಕ್ಕೆ ಸಿದ್ಧಳಿರುತ್ತೆ ನೆ. ಇದನ್ನು ತಾವು ದಯಮಾಡಿ ಸ್ವೀಕಾರ ಮಾಡಬೇಕು. ಅಂದರೆ ನನ್ನ ಮಾತಾಪಿತೃ ಗಳ ಮತ್ತು ನನ್ನ ಪತಿಯ ಕುಲೋದ್ಧಾರವನ್ನು ಮಾಡಿದಂತಾಗುವದು ? ಎಂದು ಬಹಳ ವಿನಯಪೂರ್ವಕವಾಗಿ ಬೇಡಿಕೊಂಡಳು. ಈ ಅವಳ ನಮ್ರ ಪೂರ್ವಕವಾದ ಭಾಷಣವನ್ನು ಕೇಳಿ ಆ ಅತಿಥಿಯು ಅಂದದ್ದೇನಂದರೆ-- « ನೀವಿಬ್ಬರೂ ಗಂಡಹೆಂಡರು ಬಹಳ ಉದಾರರೂ ಪರೋಪಕಾರಿಗಳೂ ಇರು ತ್ತೀರಿ. ನಿಮ್ಮಂಥವರ ಮಾಂಸವನ್ನು ನಾನು ಭಳ್ಸಣ ಮಾಡುವದು ಸರಿ ಯಾದುದಲ್ಲ. ನೀವುಭಯತರು ಇರದಿದ್ದರೆ ಎಷ್ಟೋ ಅನ್ನಛತ್ರಗಳು ಇಲ್ಲ
ದಂತಾಗುವವು. ಇದರಿಂದ ಸಾವಿರಾರು ದೀನ ಮತ್ತು ಅನಾಥ ಜನರ ಶಾಪವು ನನಗೆ ಬಡೆದುಕೊಂಡೀತು. ಅದುದರಿಂದ ನಿಮ್ಮ ಐದು ವರ್ಷದ ಬಾಲಕ ನಾದ ಚಿಲಿಯಾಳನ ಮಾಂಸದ ಭೋಜನವನ್ನು ನನಗೆ ಮಾಡಿಸಿರಿ, ನನಗೆ
— ೧ಗಿಂಿ ಇ
ಎರಡನೇದ್ದು ಏನೂ ಬೇಕಾಗಿಲ್ಲ.” ಈ ಪ್ರಕಾರ ಆ ಅತಿಥಿಯು ಮಾತಾಡುತ್ತಿ ರುವಪ್ಪರಲ್ಲಿ ಚಿಲಿಯಾಳನು ಅಲ್ಲಿಗೆ ಬಂದು ಆ ಅತಿಥಿ ಮಹಾರಾಯನಿಗೆ ನಮ ಸ್ಕಾರಮಾಡಿ ಅವನ ಅಪೇಕ್ಷೆಯನ್ನು ಕೇಳಿಕೊಂಡ ಕೂಡಲೆ ಅವನು ಪ್ರೇಮ ದಿಂದ ತನ್ನ ತಂದೆತಾಯಿಗಳ ಕೈಯನ್ನು ಹಿಡಿದು-.-« ಪಿತನೇ! ಮಾತೆಯೇ! ಇದರಿಂದ ನೀವೇಕೆ ಇಷ್ಟು ವಿಚಾರದಲ್ಲಿ ಬಿದ್ದಿ ರುವಿರಿ? ಅತಿಥಿ ಮಹಾರಾಯನ ಅಪೇಕ್ಷೆಯನ್ನು ಕಿವಿಯಿಂದ ಕೇಳಿ ನನಗೆಷ್ಟು ಅನಂದವಾಗಿರುತ್ತ ದೆಂದು ಹೇಳಲಿ? ನನ್ನ ಮಾತಾಪಿತೃಗಳ ಮತ್ತು ನನ್ನ ಕುಲದ ಸತ್ವವನ್ನು ಕಾಪಾಡು ವದಕ್ಕಾಗಿ ನನ್ನ ದೇಹದ ಉಪಯೋಗವಾಗುವದಕ್ಕಿಂತ ನನಗೆ ಹೆಚ್ಚಿನ ಕರ್ತ ವ್ಯವು ಇನ್ನಾವದು ಇರುತ್ತದೆ? ಇದರಿಂದ ನಾನೆಷ್ಟು ಧನ್ಯನಾಗುವೆನು? ಆದು ದರಿಂದ ನೀವೆಷ್ಟು ಮಾತ್ರ ಕ್ಯೂ ಅನುಮಾನ ಮಾಡದೆ ನನ್ನ ಮಾಂಸವನ್ನು ಈ ಅತಿಥಿಗೆ ಸಮರ್ಪಿಸಿರಿ. ಅಂದರೆ ಕೈಲಾಸನಾಥನು ಸಂತುಷ್ಕನಾಗುವನು. ನೀವು ಯತ್ವಿಂಚಿತ್ಸಾ ದರೂ ಖೇದಪಡಬೇಡಿರಿ” ಎಂದು ಅವರಿಗೆ ಹೇಳಿದನು. ಈ ರೀತಿಯಿಂದ ಆ ಸದ್ಗುಣಿಯಾದ ಚಿಲ್ಲಾಳನು ಮಾತಾಡುವದನ್ನು ಕೇಳಿ ಆ ಅತಿಥಿ ವೇಷಧಾರಿಯಾದ ಶ್ರೀ ಶಂಕರನಿಗೆ ಅತ್ಯಾನಂದವಾಯಿತು. ಆದರೆ ಅವನು ಅದನ್ನು ಹೊರಗೆ ಏನೂ ತೋರಿಸಿಗೊಡದೆ ಶ್ರೀಯಾಳನಿಗೂ ಚಾಂಗು ಣಿಗೂ ಹೇಳಿದ್ದೇನಂದರೆ“ ಈ ಅರ್ಭಕನು ನನ್ನ ಇಚ್ಛೆಯನ್ನು ತೃಪ್ತ ಪಡಿಸಲಿಕ್ಕೆ ಸಿದ್ಧನಿರುವಾಗ ನೀವೇಕೆ ಮ್ಯರ್ಥವಾಗಿ ಅಡ್ಡಬರುತ್ತೀರಿ? ನೀವು ವಿಲಂಬ ಮಾಡದೆ ಈ ಹುಡುಗನನ್ನು ಕೊಂದು ಅವನ ಮಾಂಸವನ್ನು ನನಗೆ ಪಾಕ ಮಾಡಿ ನನಗೆ ಭೋಜನ ಮಾಡಿಸಿರಿ. ಇದು ನಿಮ್ಮ ಕೈಯಿಂದ ಆಗ ದಿದ್ದರೆ ನನಗೆ ಸ್ಪಷ್ಟವಾಗಿ 4 ನಿಮ್ಮಿಂದ ಆಗುವದಿಲ್ಲ ಎಂದು ಉತ್ತರ ಕೊಡಿರಿ. ಅಂದರೆ ನಾನು ಈಗಲೇ ನಿಮ್ಮ ಸತ್ವಹರಣ ಮಾಡಿ ಇಲ್ಲಿಂದ ಹೊರಟು ಹೋ ಗುತ್ತೇನೆ” ಎಂದು ನಿಷ್ಠುರವಾಗಿ ಹೇಳಿದನು.
ಗಿಷಲ
೪. ಪರೀಕ್ಷೆಯ ಪರಿಸಮಾಪ್ತೀಯು. ಆಗನ
ಆ ಅತಿಥಿಯು ಈ ಪ್ರಕಾರ ನಿಷ್ಠುರವಾಗಿ ನುಡಿದುದನ್ನು ಕೇಳಿ ಶ್ರೀಯಾಳನೂ ಅವನ ರಾಣಿಯಾದ ಚಾಂಗುಣೆಯೂ ತಮ್ಮ ಸುಕುಮಾರನಾದ ಚಿಲ್ಲಾಳನ ಮಾಂಸವನ್ನು ತಾವು ಕೊಡದಿದ್ದರೆ ಅವನು ಶಾಂತನಾಗುವದಿಲ್ಲೆಂ ದು ನೋಡಿ ಅವನ ಇಚ್ಛೆಯನ್ನು ತೃುಪ್ತಿಪಡಿಸಬೇಕೆಂದು ಕೊನೆಗೆ ನಿಶ್ಚಯ ಮಾಡಿದರು. ಅಮೇಲೆ ಚಾಂಗುಣಿಯು ಶ್ರೀಯಾಳರಾಜನ ಅಪ್ಪಣೆಯ ಮೇ ರೆಗೆ ತನ್ನ ಐದು ವರ್ಷ ಪ್ರಾಯದ ಮಗನಾದ ಚಿಲ್ಲಾಳನನ್ನು ಒಗಲೊಳಗೆ ಕುಳ್ಳಿರಿಸಿಕೊಂಡು ಪಾಠಶಾಲೆಗೆ ಹೋದಳು. ಅಲ್ಲಿ ಚಾಂಗುಣಿಯು ಚಿಲ್ಲಾ ಳನ ಮುಖದ ಕಡೆಗೆ ಬಾರಿ ಬಾರಿಗೆ ನೋಡಿ ಅವನ ಚುಂಬನವನ್ನು ತೆಗೆದು ಕೊಂಡು, ಅಷ್ಟರಿಂದ ಸಮಾಧಾನವಾಗದೆ, ಪುನಃ ಮುಖವನ್ನು ನೋಡಿ-- «ನಾನೇ ನನ್ನ ಕೈಯಿಂದ ನನ್ನ ಸುಕುಮಾರನ ಕಂಠವನ್ನು ಛೇದಿಸಿ ಅವನ ಮಾಂಸವನ್ನು ತೆಗೆದು ಪಾಕವನ್ನು ಸಿದ್ಧಮಾಡಿ, ವಿಪ್ರವರ್ಯನಿಗೆ ನೀಡುವ ಪ್ರಸಂಗವು ಬಂದಿತೇ? » ಎಂದು ಶೋಕ ಮಾಡಲಿಕ್ಕೆ ಹತ್ತಿ ಒಂದೇಸವನೆ ಕಣ್ಣೀರು ಸುರಿಸಿದಳು. ಆಗ ಚಿಲ್ಲಾಳನು ಅವಳಿಗೆ... ತಾಯೂ! ನೀನು ಈ ಪ್ರಕಾರ ಶೋಕವನ್ನು ಮಾಡುವದು ಉಚಿತವಲ್ಲ. ಸತ್ವರಕ್ಸಣದಕಿಂತಲು ಈ ಮೃಣಮಯವಾದ ಪುತ್ರನ ದೇಹವು ಹೆಚ್ಚಿನದಲ್ಲ. ನಾನು ನನ್ನ ದೇಹ ವನ್ನು ಅನಂದದಿಂದ ವಿಪ್ರವರ್ಯನಿಗೆ ಅರ್ಪಿಸಿದರೆ ಸಾಕ್ಷಾತ್ ಶ್ರೀ ಶಂಕರನಿಗೆ ಸಂತೋಷವಾಗುವದು” ಎಂದು ಸಮಾಧಾನ ಮಾಡಿದನು. ಚಿಲ್ಲಾಳನ ಈ ಮನೋಹರವಾದ ವೇದಾಂತವಚನ ಶ್ರವಣದಿಂದ ಚಾಂಗುಣಿಯ ದುಃಖವು ದ್ವಿಗುಣಿತವಾಯಿತು. ಅವಳ ಚಿತ್ತವು ಮತ್ತಿಷ್ಟು ವಿಭ್ರಮವಾಗಿ ಅವಳು ಶೋಕ ಮಾಡಹತ್ತಿದಳು. ಅಗ ಚಿಲ್ಲಾಳನು ತನ್ನ ತಾಯಿಗೆ ಪುನಃ-_«ಮಾ
ಎ. ೧೪ ೨
ತೇ! ನೀನು ಸಾಮಾನ್ಯ ಜನರಂತೆ ಈ ಪ್ರಕಾರ ಶೋಕ ಮಾಡುವದನ್ನು ಬಿಡು. ಕರ್ತವ್ಯವನ್ನು ಮರೆತು ಬಿಟ್ಟು ಈ ಪ್ರಕಾರ ಶೋಕ ಮಾಡುವದು ನಿನ್ನಂಥ ವಳಿಗೆ ಶ್ಲಾಘಫ್ಯುವಲ್ಲ. ಈ ಸಮಯದಲ್ಲಿ ನಾವು ನಮ್ಮ ಸತ್ವವನ್ನು ರಕ್ಷಣ ಮಾಡಿಕೊಂಡರೆ ಪರಮೇಶ್ವರನ ಕೃಪೆಯಿಂದ ನಾನು ಈ ನಿನ್ನ ಪುಣ್ಯ ಗರ್ಭ ದಲ್ಲಿ ಪುನಃ ಹುಟ್ಟಿ ನಿನಗೆ ಸುಖವನ್ನು ಕೊಡುವೆನು. ಆದುದರಿಂದ ನೀನು ಇನ್ನುಮೇಲೆ ಮಾಯಾಜಾಲಕ್ಕೆ ಒಳಗಾಗದೆ ತೀವ್ರವಾಗಿ ನನ್ನ ಶಿರಚ್ಛೇ ದವನ್ನು ಮಾಡು. ನೀನು ಹೀಗೆ ಮಾಡಲಿಕ್ಕೆ ವಿಲಂಬ ಮಾಡಿದರೆ ಅತಿಥಿ ಮಹಾರಾಯನು ನಮ್ಮೆಲ್ಲರ ಮೇಲೆ ಸಿಟ್ಟಾಗಿ ನಮ್ಮ ಸತ್ವವನ್ನು ಹರಣ ಮಾಡಿ ಕೊಂಡು ಹೋಗುವನು? ಎಂದು ಅಂಗಲಾಚಿ ಬೇಡಿಕೊಂಡನು. ಆಗ ಜಾಂ ಗುಣಿಯು ತನ್ನ ಪುತ್ರನ ತೇಜಸ್ವಿ ನುಡಿಗಳನ್ನು ಕೇಳಿ ಎಚ್ಚರಿಕೆಯ ಮೇಲೆ ಬಂದು, ತನ್ನ ಮನಸ್ಸನ್ನು ಕಲ್ಲಿನಕಿಂತಲು ಕಠಿಣ ಮಾಡಿ, ಪುತ್ರನ ಶಿರಚ್ಛೇದ ಮಾಡಿದಳು! ಆ ಮೇಲೆ ಅವಳು ಪುನಃ ಮೋಹದಿಂದ ತನ್ನ ಪುತ್ರನ ನಿರ್ಜೀವ ಮುಖವನ್ನು ತನಗೆ ನೋಡಲಿಕ್ಕೆ ಇಟ್ಟುಕೊಂಡು, ಉಳಿದ ಅವನ ಶರೀರ ವನ್ನು ಕುದಿಸಿ ಪಾಕವನ್ನು ಸಿದ್ಧ ಮಾಡಿ, ಅದನ್ನು ಒಂದು ತಾಓನಲ್ಲಿ ಬಡಿಸಿ ಕೊಂಡು ತನ್ನ ಪತಿಯೊಂದಿಗೆ ಅತಿಥಿಯ ಮುಂದೆ ಒಯ್ದು ಇಟ್ಟು... ಸ್ಟಾ ಮಿನ್! ತಮ್ಮ ಆಜ್ಞೆ. ಯ ಪ್ರಕಾರ ಪುತ್ರ ಮಾಂಸವನ್ನು ಸಿದ್ಧಮಾಡಿ ತಂದಿರು ತ್ತೇನೆ. ದಯಮಾಡಿ ಇದನ್ನು ಸ್ವೀಕಾರ ಮಾಡಬೇಕು” ಎಂದು ಬೇಡಿಕೊಂ ಡಳು. ಅಗ ಆ ಅತಿಥಿಯು ಆ ತಾಟಓನ ಕಡೆಗೆ ಸೂಕ್ರ್ಮುವಾಗಿ ನೋಡಿದಂತೆ ಮಾಡಿ ಕ್ರೋಧಾವೇಶದಿಂದ-- ಚಾಂಗುಣೀ! ನೀನು ಮಹಾ ವಂಚಕಳು. ಈ ತಾಟಓನಲ್ಲಿ ನಿನ್ನ ಪುತ್ರನ ಶಿರಸ್ಸು ಕಾಣಲೊಲ್ಲದು. ಶರೀರದ ಎಲ್ಲ ಅವಯ ವಗಳಲ್ಲಿ ಶಿರಸ್ಸೇ ಮುಖ್ಯವಾದದು. ಅದನ್ನು ನೀನು ಮೋಹಕ್ಕಾಗಿ ಬಚ್ಚಿಟ್ಟ ರುವೆ. ಅಂದಮೇಲೆ ಈ ನೀಚ ಭೋಜನವನ್ನು ನಾನು ಹೇಗೆ ಸ್ವೀಕಾರ ಮಾ
__ ೧೫
ಡಲಿ! ” ಎಂದನು. ಆಗ ಶ್ರೀಯಾಳರಾಜನು ಭಯಭೀತನಾಗಿ ಚಾಂಗುಣಿಗೆ- « ಪ್ರಿಯಸಖೀ! ಅತಿಥಿ ಮಹಾರಾಯನು ನುಡಿದುದಕ್ಕೆ ನಿನ್ನ ಉತ್ತರವೇನದೆ?? ಎಂದು ವಿಚಾರಿಸಲು ಚಾಂಗುಣೆಯು....« ರಾಜನೇ! ನಾನು ಪುತ್ರಮೋಹ ದಿಂದ ನನ್ನ ಪುತ್ರನ ಮುಖಾವಲೋಕನ ಮಾಡಲಿಕ್ಕೆ ಅವನ ಶಿರಕಮಲವ ನ್ನು ಬಚ್ಚಿಟ್ಟಿದ್ದು ಸತ್ಯವದೆ ಎಂದು ಒಪ್ಪಿಕೊಂಡಳು. ಆಗ ಅತಿಥಿಯು-. « ರಾಜನೇ! ನಿನ್ನ ಹೆಂಡತಿಯ ಕಪಟಿತನವನ್ನು ನೋಡಿದಿಯಾ? ನಾನು ನಿಮ್ಮ ಮನೆಯಲ್ಲಿ ಭೋಜನವನ್ನು ಗ್ರಹಣ ಮಾಡಲಾರೆನು. ಇಗೋ ನೋ ಡು! ನಿನ್ನ ಸತ್ವವನ್ನು ಹರಣ ಮಾಡಿಕೊಂಡು ಇಲ್ಲಿಂದ ಹೊರಟಿನು” ಎಂದು ಹೇಳಿ ಅಲ್ಲಿಂದ ಹೊರಟು ಹೋಗಲಿಕ್ಕೆ ಹತ್ತಿದನು. ಆಗ ಉಭಯತರೂ ಅತಿ ಥಿಯ ಪಾದಕ್ಕೆ ನಮಸ್ಕರಿಸಿ... ಸ್ವಾಮಿನ್ ನಮ್ಮ ಅಪರಾಧವನ್ನು ಕ್ಲೃಮಿ ಸಬೇಕು. ಅಜ್ಞಾನದಿಂದ ಆದ ಕೆಲಸವನ್ನು ಲಕ್ಸ್ಯದಲ್ಲಿ ತೆಗೆದುಕೊಳ್ಳಬಾ ರದು. ಈಗಲೇ ಆ ಶಿರಸ್ಸನ್ನು ತಂದು ಅದರ ಪಾಕವನ್ನು ಮಾಡಿ ಅದನ್ನು ಸಹ ತಮ್ಮ ತಾಓನಲ್ಲಿ ಬಡಿಸುತ್ತೇವೆ” ಎಂದು ಆ ಅತಿಥಿಗೆ ಹೇಳಿಕೊಂಡರು. ಆಗ ಆ ಅತಿಥಿಯು ಪುನಃ ತನ್ನ ಸ್ಥಳದ ಮೇಲೆ ಬಂದು ಕುಳಿತು ಚಾಂಗುಣಿಗೆ- « ನೀನು ನಿನ್ನ ಮಗನ ಶಿರಸ್ಸನ್ನು ಇಲ್ಲಿಗೆ ತೆಗೆದುಕೊಂಡು ಬಂದು ನನ್ನ ಸಮ ಕ್ರವೇ ಕುಟ್ಟಬೇಕು. ಹಾಗೂ ಆ ಪ್ರಕಾರ ಮಾಡುವಾಗ್ಗೆ ಕಿಂಚಿತ್ತಾದರೂ ದುಃಖಮಾಡಬಾರದು ಅಥವಾ ಕಣ್ಣೀರು ಉದುರಿಸಬಾರದು. ಈ ಪ್ರಕಾರ ನೀನು ನಡೆದರೆ ಮಾತ್ರ ನಾನು ನಿಮ್ಮಲ್ಲಿ ಭೋಜನಮಾಡುವೆನು ಎಂದು ಹೇಳಿದನು. ಅದರಂತೆ ನಡೆಯಲಿಕ್ಕೆ ರಾಜನು ಸಹ ಚಾಂಗುಣಿಗೆ ಅಪ್ಪಣೆ ಯನ್ಸಿತ್ತನು. ಕೂಡಲೇ ಅವಳು ಪಾಕಶಾಲೆಯೊಳಗೆ ಹೋಗಿ ತಾನು ಮೋ ಹದಿಂದ ಬಚ್ಚಿಟ್ಟಿದ್ದ ತನ್ನ ಬಾಲಕನ ಶಿರಸ್ಸನ್ನು ಹೊರಗೆ ತೆಗೆದುಕೊಂಡು ಬಂದು ಮಂಗಲ ಹಾಡುಗಳನ್ನು ಹಾಡುತ್ತ ಅದನ್ನು ಕುಟ್ಟಿ ಹಣ್ಣುಮಾಡಿ
Oe ಜಾಲ
ಅತಿಥಿಯ ಮುಂದೆ ತಂದಿಟ್ಟು ಆವನಿಗೆ." ಹೇ ಭಗವನ್! ಕರುಣಾನಿಧಿ ಯೇ! ದೀನೊದ್ಭಾರನೇ! ತಾವು ಇದನ್ನು ಗ್ರಹಣ ಮಾಡಬೇಕು” ಎಂದು ಪ್ರಾರ್ಥನೆ ಮಾಡಿದಳು. ಆಗ ಅತಿಥಿಯು ಶ್ರೀಯಾಳರಾಜನಿಗೆ....« ಎಲ್ಲೆ ಶ್ರೀಯಾಳಭೂಪಾಲನೇ! ನೀನೂ ನಿನ್ನ ಪ್ರಿಯ ಪತ್ನಿಯಾದ ಚಾಂಗುಣಿಯೂ ನನ್ನ ಪಂಗ್ಮಿ ಗೆ ಭೋಜನಕ್ಕೆ ಕುಳಿತುಕೊಳ್ಳಬೇಕು ೫ ಎಂದು ಹೇಳಿದನು. ಆಗ ಶ್ರೀಯಾಳರಾಜನು ತನ್ನ ಪ್ರಿಯ ಪುತ್ರನ ಮಾಂಸವನ್ನು ಹೇಗೆ ಭಳ್ಸಣ ಮಾಡಬೇಳೆಂದು ಕಣ್ಣಿ ರು ಉದುರಿಸಲಿಕ್ಕೆ ಹತ್ತಿದನು ಅಗ ಚಾಂಗುಣಿಯು ಶ್ರೀಯಾಳರಾಜನಿಗೆ-.« ಪ್ರಾ ಣನಾಥರೇ! ಈಗ ಮನಸ್ಸಿನಲ್ಲಿ ಏನೂ ತರಬಾ ರದು. ನಾನು ಇದ್ದ ಒಬ್ಬ ಮಗನ ಶಿರಚ್ಛೇದವನ್ನು ಮಾಡಿ ನನ್ನ ಕೈಯಿಂ ದಲ್ಲೇ ಅವನ ಮಾಂಸವನ್ನು ಸಿದ್ಧ ಮಾಡಿಕೊಂಡು ಸಹ ಬಂದನು. ಈಗ ನಾವು ಅತಿಥಿ ಮಹಾರಾಯನ ಪಂಗ್ಮಿಯಲ್ಲಿ ಕುಳಿತು ಭೋಜನ ಮಾಡಲಿಕ್ಕೆ ಸಿದ್ಧರಾಗದಿದ್ದರೆ ಅತಿಥಿ ಮಹಾರಾಯನು ಸಿಟ್ಟಿಗೆದ್ದು ನಮ್ಮ ಸತ್ವಹರಣ ಮಾಡಿ ಹೋಗುವನು. ನಮ್ಮ ಹೊಟ್ಟೆಯ ಮಗನನ್ನು ನಾವು ಹೊಟ್ಟಿಯಲ್ಲಿ ಹಾಕಿಕೊಳ್ಳ ೈಲಿಕ್ಕೆ ಏನೂ ಅಡ್ಡಿಯು ಕಾಣುವದಿಲ್ಲ. ನಾವು ನಮ್ಮ ಜೀವವಿ ರುವವರೆಗೆ ಹೇಗೂ ನಮ್ಮ ಸತ್ವರಕ್ಸಣ ಮಾಡಿಕೊಳ್ಳಲಿಕ್ಕೇಬೇಕು ” ಎಂದು ಹೇಳಿದಳು. ಶ್ರೀಯಾಳರಾಜನು ಚಾಂಗುಣಿಯ ಸಮಾಧಾನೋಕ್ತಿಯನ್ನು ಕೇಳಿ ಅತಿಥಿಯ ಪಂಗ್ಮಿಗೆ ಭೋಜನಕ್ಕೆ ಕುಳಿತುಕೊಳ ಲು ಸಿದ್ಧನಾಗಿ... 4( ಸ್ವಾಮಿನ್! ನಾವಿಬ್ಬರೂ ತಮ್ಮ ಪಂಗ್ಲಿ ಗೆ ಭೋಜನಕ್ಕೆ ಒಂದೆವ್ರ ಎಂ ದು ಹೇಳಿ ಅವನ ಪಂಗ್ಮಿ ಗೆ ಹೋಗಿ ಕುಳಿತರು. ಆ ಮೇಲೆ ಅತಿಥಿಯು ಭೋ ಜನ ಮಾಡಲಿಕ್ಕೆ ಆರಂಭ ಮಾಡುವ ಮುಂಚೆ ಪುನಃ...'` ಎಲ್ಫೆ ರಾಜನೇ! ನೀನು ನಿಪುತ್ರಿಕನಿರುತ್ತೀ. ನಿಪುತ್ರಿಕರ ಮನೆಯಲ್ಲಿ ಅನ್ನಗ್ರಹಣ ಮಾಡ ಬಾರದೆಂದು ಶಾಸ್ತ್ರವಚನವಿರುತ್ತದೆ. ಆದುದರಿಂದ ನಾನು ನಿನ್ನ ಮನೆಯಲ್ಲಿ
— ೧೬ —
ಅನ್ನವನ್ನು ಗ್ರಹಣ ಮಾಡಲಾರೆನು” ಎಂದು ಹೇಳಿದನು. ಆಗ ಶ್ರೀಯಾಳ ರಾಜನೂ ಚಾಂಗುಣಿಯೂ ಆ ಅತಿಥಿಗೆ ಕೈಜೋಡಿಸಿ ಸ್ವಾಮಿ! ಈ ಪ್ರಕಾರ ತಾವು ದಯಮಾಡಿ ಮಾಡಬಾರದು. ಇದ್ದ ಒಬ್ಬ ಮಗನನ್ನು ತಮ್ಮ ಗೋಸ್ಕರ ವಧ ಮಾಡಿದೆವು. ಈಗ ನಾವು ಇನ್ನೊಬ್ಬ ಮಗನನ್ನು ಎಲ್ಲಿಂದ ತರಬೇಕು? ತಾವು ಇಚ್ಛಾಭೋಜನ ಮಾಡಿಕೊಂಡು ಸ್ಮರಾಗಿ ಹೋದರೆ ಸಾಕು. ನಾವು ನಮ್ಮ ಮಗನನ್ನು ವಧ ಮಾಡಿದ ದುಃಖವನ್ನು ಸಹ ಮರೆತು ಬಿಡುವೆವು. ಈಗ ತಾವು ನಮಗೆ ನಿಫುತ್ರಿಕರೆದು ದೋಷವಿಟ್ಟು ನಮ್ಮಲ್ಲಿ ಭೋಜನ ಮಾಡದೆ ಹೋದರೆ ಗಾಯಕ್ಕೆ ಒರಿಯನ್ನು ಕೊಟ್ಟಾಗ ಹಾಗೆ ತಾವು ದಯಮಾಡಿ ಮಾಡಬಾರದು. ಭೋಜನ ಮಾಡಿಕೊಂಡೇ ಹೋಗಬೇಕು » ಎಂದು ಬಹುಪರಿಯಿಂದ ಬೇಡಿಕೊಂಡರು. ಶ್ರೀಯಾಳರಾಜನ ಮತ್ತು ಚಾಂಗುಣಿಯ ಶೋಕವನ್ನು ನೋಡಿ ಆ ಅತಿಥಿಯ ಮನಸ್ಸು ಕರಗಿ ಹೋಗಿ ಅವನು ಅವರಿಬ್ಬ ರಿಗೂ- - ನೀವು ಮಹಾ ಸತ್ವಶೀಲರಿರುತ್ತೀರಿ. ನಿಮಗೆ ನಾನು ಪ್ರಸನ್ನನಾಗಿರುತ್ತೇನೆ. ನಿಮ್ಮ ಅಪೇಕ್ಷೆಯು ಏನಿರುತ್ತದೆಂಬು ವದನ್ನು ನೀವು ಅನುಮಾನ ಮಾಡದೆ ಬೇಡಿಕೊಳ್ಳಿ ರಿ”. ಎಂದು ಹೇಳಿದನು. ಆಗ ಅವರಿಬ್ರರೂ-.-4 ಸ್ವಾಮಿನ್, ನಮ್ಮ ಮೇಲೆ ಬಂದಿರುವ ನಿಫುತ್ರಿ ಕತನದ ದೋಷವು ಹೋಗಬೇಕು? ಎಂದು ಬೇಡಿಕೊಂಡರು. ಆಗ ಅತಿಥಿಯು ಚಾಂಗುಣಿಗೆ....." ಎಲ್ಲೆ ಮಹಾ ಪತಿವ್ರತೆಯಾದ ಚಾಂಗುಣಿಯೇ! ನೀನು ನಿನ್ನ ಮಗನಾದ ಚಿಲ್ಲಾಳನಿಗೆ ನಮ್ಮ ಪಂಗ್ಮಿಯಲ್ಲಿ ಕುಳಿತು ಭೋಜನ ಮಾಡ ಅಕ್ಕೆ ಇನ್ನೊಂದು ತಾಟು ಬಡಿಸು. ಮಗನನ್ನು ಬಿಟ್ಟು ಮಾತಾಪಿತೃಗಳು ಭೋಜನ ಮಾಡುವದು ಉಚಿತವಲ್ಲ” ಎಂದು ನುಡಿದನು. ಆಗ ಚಾಂಗು ಣಿಯು ಪ್ರತ್ಯಕ್ಷ ಕೈಲಾಸನಾಥನಾದ ಶಂಕರನೇ ಅತಿಥಿಯ ವೇಷದಿಂದ ತಮ್ಮಲ್ಲಿಗೆ ಬಂದಿರುತ್ತಾನೆಂದು ಮನಸ್ಸಿನಲ್ಲಿ ದೃಢವಾಗಿ ತಿಳಿದುಕೊಂಡು ಮತ್ತೊ ಂದು ತಾಬನ್ನು ಚಿಲ್ಲಾಳನಿಗಾಗಿ ಬಡಿಸಿ, ಅತಿಥಿಯ ಆಜ್ಞೆಯ ಪ್ರಕಾರ-
ಎಾಾ ಗೀಲ ಎ.
«« ಬಾಳಾ ಚಿಲ್ಲಾಳಾ! ಬಾ” ಎಂದು ದೊಡ್ಡ ಧ್ವನಿಯಿಂದ ಕೂಗಿದಳು. ಆಗ ಚಿಲ್ಲಾಳನು ಓಡಿ ಬಂದು ಆ ಅತಿಥಿಗೂ ತನ್ನ ಮಾತಾಪಿತೃ್ರಗಳಿಗೂ ನಮಸ್ತ್ರ ರಿಸಿ--«ಹೇ ಪ್ರಿಯ ಮಾತೇ! ನಾನು ನನ್ನ ಓರಿಗೆಯವರ ಸಂಗಡ ಅನಂದ ಪೂರಿತನಾಗಿ ಆಡುತ್ತ ನಿಂತಿದ್ದೆ ನು. ಏನು ಕಾರಣ ಕರೆದೆ? ಹೇಳು. ಈ ಬಾಲ ಕನು ನಿನ್ನ ಸೇವೆಯನ್ನು ಮಾಡಲಿಕ್ಕೆ ತಶ್ಪರನಿರುತ್ತಾನೆ ಎಂದು ಹೇಳಿದನು. ಆಗ ಚಾಂಗುಣಿಯು ಅವನನ್ನು ಮೇಲಕ್ಕೆ ಎತ್ತಿ ಅಪ್ಪಿಕೊಂಡು ಮದ್ಬಾಡಿ ದಳು. ಹಾಗೂ ಉಭಯ ಪತಿಪತ್ನಿಯರು ಆನಂದದಿಂದ ಚಿಲ್ಲಾ ಳನಿಗ್ಗೆ « ಬಾಳಾ! ನಿನ್ನ ಜನ್ಮವು ನಮ್ಮಲ್ಲಿ ಆದಕಾರಣ ನಾನಿಬ್ಬರೂ ಧಸ್ಯರಾದೆವು ” ಎಂದು ಅವನಿಗೆ ಮುದ್ದು ಕೊಟ್ಟರು. ಆಗ ಆ ಅತಿಥಿಯು ರಾಜಪುತ್ರನಾದ ಚಿಲ್ಲಾಳನನ್ನು ತನ್ನ ಹತ್ತರ ಕರೆದು ತನ್ನ ಅಂಕಪೀಠದಲ್ಲಿ ಕುಳ್ಳಿರಿಸಿಕೊಂಡು ಆಶೀರ್ವಾದ ಮಾಡಿ ಶ್ರೀಯಾಳನಿಗೂ ಜಾಂಗುಣಿಗೂ ಹೇಳಿದ್ದೇನಂದರೆ ಅಷ್ಟ «ಹೇ ನ್ಭಪಶ್ರೇಷ್ಠಾ ಶ್ರೀಯಾಳಾ! ಹೇ ಮಹಾಪತಿವ್ರತೇ ಚಾಂಗುಣೇ! ನಾನು ನಿಮ್ಮ ಸತ್ವಪರೀಕ್ಷೆಯನ್ನು ಮಾಡುವ ಸಲುವಾಗಿ ಈ ಅತಿಥಿರೂಪ ವನ್ನು ಧಾರಣಮಾಡಿಕೊಂಡು ಬಂದೆನು. ನೀವು ಉಭಯತರೂ ನನ್ನ ಪರ ಮಭಕ್ಕರು. ನಾನು ಈ ಬ್ರಹ್ಮಾಂಡದ ಉತ್ಪತ್ತಿ, ಸ್ಥಿತಿ, ಲಯಗಳಿಗೆ ಕಾರ ಣನು. ನಾನೇ ತ್ರಿಜಗದಾಧಿಪತಿಯು ನಾನೇ ಸೂರ್ಯಚಂದ್ರರಿಗೆ ಪ್ರಕಾಶ ಕೊಡುವವನು. ನನ್ನಿಂದಲೇ ನವಗ್ರಹಗಳೂ ನಿಖಿಲ ತಾರೆಗಳೂ ಉತ್ಸನ್ನವಾ ದವು. ದೇವೇಂದ್ರಾದಿಗಳಿಗೆ ಸ್ವರ್ಗ ಸುಖವು ನನ್ನಿಂದಲೇ ಪ್ರಾಪ್ತವಾಗಿರು ವದು. ನಿಖಿಲ ಬ್ರಹ್ಮಾಂಡವು ಯಾರನ್ನು ಕೊಂಡಾಡುತ್ತದೋ, ಯಾರನ್ನು ವಂದಿಸುತ್ತದೋ ಆ ಮಹಾದೇವನಾದ ಶ್ರೀ ಶಂಕರನೇ ನಾನು. ಇನ್ನು ವಿಲಂಬವೇಕೆ? ನಾನು ನನ್ನ ನಿಜಸ್ವರೂಪವನ್ನು ಪ್ರಕಟ ಮಾಡುತ್ತೇನೆ. ಶುದ್ಧಾಂತಃಕರಣದಿಂದ ಅವಲೋಕನ ಮಾಡಿರಿ” ಎಂದು ಹೇಳಿ ತನ್ನ ನಿಜ ಸ್ವರೂಪವನ್ನು ಪ್ರಕಟ ಮಾಡಿದನು. ಆಗ ಶ್ರೀಯಾಳರಾಜನೂ ಚಾಂಗು
Fm
ೆಯೂ ಭಕ್ತಿಪೂರ್ವಕವಾಗಿ ಶ್ರೀ ಶಂಕರನ ಪೂಜೆಯನ್ನು ಯಥಾವಿಧಿವೂ ರ್ವಕವಾಗಿ ಮಾಡಿದರು. ತರುವಾಯ ಶ್ರೀ ಶಂಕರನು ಅವರಿಗೆ--« ನಿಮ್ಮ ಭಕ್ತಿ ಭಾವಕ್ಕೆ ನಾನು ಬಹಳೇ ಅನಂದಭರಿತನಾಗಿರುತ್ತೇನೆ. ಬೇಕಾದ ವರ ವನ್ನು ಬೇಡಿಕೊಳ್ಳಿರಿ ಎಂದು ಅಪ್ಪಣೆಯನ್ನು ಕೊಟ್ಟನು. ಆಗ ಅವರಿ ಬ್ಬರೂ ಕೈಮುಗಿದು -«ಹೇ ದೇವಾಧಿದೇವಾ! ನಮಗೆ ತಾವು ಮೋಕ್ಷ ವನ್ನು ಕೊಡಬೇಕೆಂಬುವ ಅಪೇಕ್ಷೆಯ ಹೊರತಾಗಿ ಇನ್ನೊಂದೇನೂ ಇಲ್ಲ” ಎಂದು ಬೇಡಿಕೊಂಡರು. ಅಷ್ಟರಲ್ಲಿ ಕೈಲಾಸದಿಂದ ಶ್ರೀ ಶಂಕರನ ವಿಮಾ ನವು ಕೆಳಗೆ ಇಳಿದು ಬಂದಿತು. ಆಗ ಶ್ರೀ ಶಂಕರನು ಶ್ರೀಯಾಳನಿಗೂ ಚಾಂಗು ಣಿಗೂ ತನ್ನ ವಿಮಾನದಲ್ಲಿ ಕುಳ್ಳಿರಿಸಿಕೊಂಡನು. ಹಾಗೂ ಚಿಲ್ಲಾಳನಿಗೆ ಸ್ವಹಸ್ಮದಿಂದ ಸಿಂಹಾಸನದ ಮೇಲೆ ಕುಳ್ಳಿರಿಸಿ ಅವನ ಮೇಲೆ ಛತ್ರವನ್ನು ಹಿಡಿದು ಯಾವತ್ತು ರಾಜ್ಯಕಾರಭಾರವನ್ನು ಅವನ ಮಂತ್ರಿವರ್ಯನ ಕಡೆಗೆ ಕೊಟ್ಟು ಚಿಲ್ಲಾಳನಿಗೆ ಆಶೀರ್ವಾದವನ್ನು ಮಾಡಿದನು. ಶ್ರೀಯಾಳ ಚಾಂಗು ಿಯಾದರೂ ತಮ್ಮ ಪುತ್ರನಿಗೆ ಆಶೀರ್ಪಾದವನ್ನು ಮಾಡಿ ಶ್ರೀ ಶಂಕರನ ಸಂಗಡ ವಿಮಾನದಲ್ಲಿ ಕುಳಿತು ಕೈಲಾಸಕ್ಕೆ ಹೊರಟು ಹೋದರು. ಧನ್ಯ! ಧನ್ಯ! ಶ್ರೀಯಾಳ ಚಾಂಗುಣಿಯರೂ ಅವರ ಸುಕುಮಾರನಾದ ಚಿಲ್ಲಾಳನೂ ತಮ್ಮ ಅಮೋಘವಾದ ಈಶ್ವರ ಭಕ್ತಿಯಿಂದಲೂ ಸತ್ವಗುಣದಿಂದಲೂ ಭೂಲೋಕದಲ್ಲಿ ಸತ್ಕೀರ್ತಿಯನ್ನೂ ಪರ ಲೋಕದಲ್ಲಿ ಸದ್ಧತಿಯನ್ನೂ ಸಂಹಾದಿಸಿದ್ದಕ್ಕಾಗಿ ಅವರ ಧನ ವಾಹನವನ್ನು ಎಷ್ಟು ಮಾಡಿದರೂ ಕಡಿಮೆಯೇ ಸರಿ!!
ಬಸ ಸೋ ಜೂ ಸಂಪೂರ್ಣ. ALK NLM LE
ಶೀ. ಹೊನ್ನಾಪುರಮಠ ಇವರು ರಚಿಸಿದ ನೈತಿಕ-ಧಾರ್ಮಿಕ-ಮನೋರಂಜಕ
ಇಗೆ. ಪುಸ್ತಕಗಳು. hp ೧ ಶ್ರೀ ರಾಮದಾಸಸ್ವಾಮಿಗಳ ಚರಿತ್ರ. ಬೆಜೆ೧ ರುಪಾಯಿ ೨ ನೀತಿಮಂಜರಿ. ... ಬ .... ೧೨ ಆಗೆ ೩ ಬಾಲಭಾರತ. (ಸಚಿತ್ರ) ಸ , .. ೧ ಆಣೆ ೪ ಬಾಲರಾಮಾಯಣ. (ಸಚಿತ್ರ). ... °° ೮ ಆಣೆ ೫ ಬಾಲಭಾಗವತ. (ಸಚಿತ್ರ) ಚ ೬. ಲಿ ಆಣೆ ೬. ಅದ್ಭುತಪ್ರೇಮ ಕಾದಂಬರಿ ( ಐತಿಹಾಸಿಕ ಕಾದಂಬರಿ)... ೧೨ ಆಣೆ ೩ ತ್ರಾಟಿಕಾನಾಟಕ (( ಮೊಂಡ ಗಂಡ ತುಂಟ ಹೆಂಡತಿ” ನಾಟಕ) ೧ ರು. ಲ ನಿಂದಾಪ್ರಭಾವನಾಟೆಕ (ಮುದುಕಗಂಡ ಚಕ್ಕಹೆಂಡತಿ'ನಾಟಕ)೧೨ ಅಣ € ಶ್ರೀ ರಾಮಕೃಷ್ಣ ಪರಮಹಂಸರ ಸತ್ಯಥೆಗಳು. ಎ. ೧ ಆಣೆ ೧೦. ಸಾವಿತ್ರೀಚರಿತ್ರ. (ಸಚಿತ್ರ) ಸ ..... ೫ ಆಣೆ ೧೧ ಪ್ರಹ್ಲಾದ ಚರಿತ್ರ. (ಸಚಿತ್ರ) ಚಿ ೬. ಆಣೆ ೧೨ ಸುದಾಮಚರಿತ್ರ. (ಸಚಿತ್ರ) ಕ ಚ ೪ ಆಗೆ ೧೩ ಧ್ರುವಚರಿತ್ರ., (ಸಚಿತ್ರ) ... ಪಿ ಅಣೆ ೧೪ ಚಿಲ್ಲಾಳಚರಿತ್ರ. (ಸಚಿತ್ರ) ಬ ..... ೨ ಆಣೆ ೧೫ ಶ್ರೀ ಶಿವಲೀಲಾಮೃತ ಕಥೆಗಳು. ... .... ೧೦ ಆಣೆ ೧೬ ವೀರಶೈವ ಶಿವಪೂಜಾವಿಧಿ ಮತ್ತು ಲಿಂಗಧಾರಣ ವಿಧಾನ... ೪ ಆಗೆ ೧೩ ಶ್ರೀಕೃಷ್ಣ ಚರಿತ್ರ. (ಸಚಿತ್ರ) (ಮುದ್ರಣದಲ್ಲಿ) ೧ ರುಪಾಯಿ
ಮ್ಯಾನೇಜರ ಚಂದ್ರೋದಯ ಸೈಸ್, ಧಾರವಾಡ.